Friday 6 December 2019

ಡಾ ಬಿ. ಆರ್ ಅಂಬೇಡ್ಕರ್ ಜೀವನ ಚರಿತ್ರೆ

Annal Ambedkar Manimandapam.jpg

ಅಂಬೇಡ್ಕರ್ ಮ್ಯೂಸಿಯಂನಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಪುಣೆ


ಅಂಬೇಡ್ಕರ್‍ರವರ ಜೀವನ ಚರಿತ್ರೆ


  •  ಅಂಬೇಡ್ಕರ್‍ರವರ 14ನೇ ಏಪ್ರಿಲ್ 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಅಂಬೇಡ್ಕರ್ ರವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು. ಇವರು ಮಹಾರ‍ಜಾತಿಯಲ್ಲಿ ಹುಟ್ಟಿದರು. ಈ ಜಾತಿಯವರು ಹೆಚ್ಚಿನ ಜನ ಬ್ರಿಟಿಷ್ ಸರ್ಕಾರದ ಮಿಲಿಟರಿ ಸೇವೆಯಲ್ಲಿ ಉದ್ಯೋಗಕ್ಕಾಗಿ ಸೇರುತ್ತಿದ್ದರು.
  • ಇವರ ಅಜ್ಜ ಮಾಲೋಜಿ ಸಕ್ವಾಲ್, ಇವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಬೋಂಬೆ ಸೇನೆಯಲ್ಲಿ ಸೇರಿದರು, ಹವಾಲ್ದಾರರಾಗಿ ನಿವೃತ್ತಿ ಹೊಂದಿದ್ದರು. ಇವರು ಆ ಕಾಲಕ್ಕೆ 19 ಮೆಡಲ್ ಗಳನ್ನು ಗಳಿಸಿದ್ದರು. ಇವರಿಗೆ ಇಬ್ಬರು ಮಕ್ಕಳು ರಾಮಜಿ ಸಕ್ವಾಲ್, ಮೀರಾ ಸಕ್ವಾಲ್. ರಾಮಜಿ ಸಕ್ವಾಲ್‍ರ ಹೆಂಡತಿ ಭೀಮಬಾಯಿ. ಇವರು ಠಾಣೆ ಜಿಲ್ಲೆಯ ಮುರಬಾದಕರ್ ಎಂಬ ಅಸ್ಪೃಶ್ಯ ಕುಟುಂಬದವರು.
  • ಇವರ ತಂದೆ ಹಾಗೂ ಆರು ಜನ ಚಿಕ್ಕಪ್ಪಂದಿರು, ಸೈನ್ಯದಲ್ಲಿ ಸುಬೇದಾರರಾಗಿದ್ದರು.ರಾಮಜಿ ಮತ್ತು ಭೀಮಬಾಯಿ ರವರು ಇಬ್ಬರು ಕಷ್ಟ ಸಹಿಷ್ಣುಗಳಾದ ಸತಿಪತಿಗಳಾಗಿದ್ದರು ಇವರಿಗೆ 14 ಮಕ್ಕಳು ಹುಟ್ಟಿದರು, ಈ 14 ನೆ ಮಗನೇ ಡಾ ಅಂಬೇಡ್ಕರ್. ಅಂಬೇಡ್ಕರವರ ಮೊದಲ ಹೆಸರು ಭೀಮರಾವ್ ಆಗಿತ್ತು. ಡಾ. ಅಂಬೇಡ್ಕರರು ನಾನು ನನ್ನ ತಂದೆ ತಾಯಿಯರಿಗೆ 14 ನೇ ರತ್ನನಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
  • ರಾಮಜಿ ಸಕ್ವಾಲ್‍ರವರಿಗೆ 14 ಮಕ್ಕಳಲ್ಲಿ ಬದುಕುಳಿದ್ದಿದ್ದು 5 ಜನ ಮಕ್ಕಳು , ಅವರು ಮಂಜುಳಾ,ತುಳಸಿ,ಬಲರಾಮ,ಅನಂದರಾವ್ ಮತ್ತು ಭೀಮರಾವ್, ಭೀಮರಾವ್ 2 ವರ್ಷದ ಬಾಲಕನಿದ್ದಾಗ ತಂದೆ ನೌಕರಿಯಿಂದ ನಿವೃತ್ತಿ ಹೊಂದಿದರು. ಇವರು 14 ವರ್ಷಗಳವರೆಗೆ ಮಿಲಿಟರಿ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಸೇವೆಸಲ್ಲಿಸಿದ್ದರು. ಇವರು ಮರಾಠಿ,ಹಿಂದಿ ಭಾಷೆಯಲ್ಲಿ ಪ್ರಭುದ್ಧ ಜ್ಞಾನಹೊಂದಿದ್ದರು.
  • ಜೊತೆಗೆ ಆಂಗ್ಲ ಭಾಷೆಯನ್ನು ಬಲ್ಲವರಾಗಿದ್ದರು. ಮಕ್ಕಳಲ್ಲಿ ದೇಶಭಕ್ತಿ ಜ್ಞಾನ, ಹಾಗೂ ಧರ್ಮದ ಬಗ್ಗೆ ತಿಳಿಹೇಳಿಕೊಡುವಲ್ಲಿ ಸಫಲರಾದರು. ಮುಂದೆ ಭೀಮರಾವ್ ರವರು ಉತ್ತಮ ಸಂಸ್ಕೃತಿ ಹೊಂದಲು ತಂದೆಯವರು ಹೇಳಿಕೊಟ್ಟ ನೀತಿ ಪಾಠ ಸಹಾಯಕವಾಯಿತು. ಇವರು ಕಬೀರ ಪಂಥದವರು, ಕಬೀರರ ಧೋಹೆಗಳು, ರಾಮಾಯಣ ಮಹಾಭಾರತದ ಕತೆಗಳನ್ನು ಮಕ್ಕಳಿಗೆ ಮುಂಜಾನೆ ಮತ್ತು ಸಾಯಂಕಾಲ ಹೇಳಿಕೊಡುತ್ತಿದ್ದರು.
  • ರಾಮಜಿ ಸಕ್ವಾಲ್ ರವರು ಮಿಲಿಟರಿ ಸೇವೆಯಿಂದ ನಿವೃತ್ತಿಯಾದ ನಂತರ ಡಾಪೋಲಿಗೆ ಬಂದರು. ಆದರೆ ಕೆಲವೇ ದಿನಗಳಲ್ಲಿ ಮಿಲಿಟರಿ ಕ್ವಾರ್ಟಸ್ನಲ್ಲಿ ಅವರಿಗೆ ಸೇವೆ ಸಿಕ್ಕ ಕಾರಣ ಸಾತಾರಕ್ಕೆ ಕುಟುಂಬ ವರ್ಗಾಯಿಸಿದರು. ಭೀಮರಾವ್ ಪ್ರಾಥಮಿಕ ಶಿಕ್ಷಣ ಸಾತಾರದಲ್ಲಿ ಪ್ರಾರಂಭವಾಯಿತು. ಭೀಮರಾವ್ ಆರು ವರ್ಶದ ಬಾಲಕನಿದ್ದಾಗ ಅವರ ತಾಯಿ ಮರಣ ಹೊಂದುತ್ತಾರೆ.
  • ಈ ಕಾರಣಕ್ಕಾಗಿ ಭೀಮರಾವ್ ರು ತನ್ನ ತಾಯಿಯ ಮಮತೆ ತನ್ನ ಅತ್ತೆಯಾದ ಮೀರಾಳಲ್ಲಿ ಕಂಡುಕೊಳ್ಳುತ್ತಾರೆ. ಮೀರಾ ಕರುಣೆಯ ಮೂರ್ತಿಯಾಗಿದ್ದಳು, ಗೂನುಬೆನ್ನಿನಿಂದಾಗಿ ಮದುವೆ ಯಾಗದೆ ತನ್ನ ಅಣ್ಣನ ಮಕ್ಕಳ ಪಾಲನೆ ಪೋಷಣೆಯಲ್ಲಿಯೇ ಸರ್ವಸ್ವವನ್ನೂ ಕಂಡುಕೊಳ್ಳುವಳು. ಭೀಮರಾವ್ ರವರಿಗೆ ಪ್ರಾಥಮಿಕ ಶಾಲೆಯಲ್ಲಿಯೇ ಅಸ್ಪೃಶ್ಯತೆಯ ಅನುಭವವಾಗುತ್ತದೆ, ಶಿಕ್ಷಕರು ಮತ್ತು ಸಹಪಾಠಿಗಳು ಇವರು ದಲಿತ ಜಾತಿಗೆ ಸೇರಿದವರೆಂಬ ಕಾರಣಕ್ಕಾಗಿ ಸೇರುತ್ತಿರಲ್ಲಿಲ್ಲ.
  • ಅದಕ್ಕಾಗಿ ಶಿಕ್ಷಣ ಹೊರಗಡೆ ಕುಳಿತುಕೊಂಡು ಕಲಿಯಬೇಕಾಯಿತು.ಭರಾವರಿಗೆ ಪ್ರಾಥಮಿಕ ಶಾಲೆಯಲ್ಲಿ ಎಲ್ಲರ ಅಸಹ್ಯದಿಂದಾಗಿ ಶಿಕ್ಷಣದಲ್ಲಿ ಅವರಿಗೆ ಹೆಚ್ಚು ಒಲವೇ ಇರಲಿಲ್ಲ, ದ್ಯಾನ ಮಾಡುವುದು, ಮೇಕೆಯೊಡನೆ ಆಟವಾಡುವುದು ಅವರ ಹವ್ಯಾಸಗಳಾಗಿದ್ದವು. ಈ ಮಧ್ಯ ರಾಮಜಿ ಸಕ್ವಾಲ್ ರವರು ಸಂಸಾರದ ನಿರ್ವಹಣೆಗಾಗಿ ಇನ್ನೊಂದು ಮದುವೆಯಾದರು.
  • ಮಲತಾಯಿ ತನ್ನ ತಾಯಿಯ ಬಟ್ಟೆ ಹಾಗೂ ಒಡವೆಗಳನ್ನು ಹಾಕಿಕೊಂಡಾಗ, ಅದಕ್ಕಾಗಿ ತಂದೆ, ಅತ್ತೆಯೊಂದಿಗೆ ಜಗಳವಾಡುತ್ತಿದ್ದರು ಸೋದರತ್ತೆ ವಾತ್ಸಲ್ಯದಿಂದ ಮಲತಾಯಿಯ ಅನಿವಾರ್ಯತೆಯ ಬಗ್ಗೆ ತಿಳಿ ಹೇಳಿದರು ಆದ್ರೂ ಸಹ ಸೋದರತ್ತೆಯ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಈ ಮನೆಯಲ್ಲಿ ಬದುಕುವುದು ಬೇಡ ಎಂದು ನಿರ್ಧರಿಸಿ ತನ್ನ ರೊಟ್ಟಿಯನ್ನು ತಾನೇ ಸಂಪಾದಿಸಿಕೊಳ್ಳಬೇಕೆಂದು ನಿರ್ಧರಿಸಿದರು.
  • ತನ್ನ ವಯಸ್ಸಿನವರು ಬಾಂಬೆಯ ಬಟ್ಟೆಯ ಮಿಲ್ಲಿನಲ್ಲಿ ಕಾರ್ಮಿಕರಾಗಿ ದುಡಿಯಬೇಕೆಂದು ನಿರ್ಧರಿಸಿ ಬಾಬ್ ಗೆಗೋಗಳು ಬೇಕಾಗುವ ಹಣವನ್ನು ತನ್ನ ಅತ್ತೆಯ ಪರ್ಸ್ ನ್ನು ಮುರು ದಿನ ರಾತ್ರಿ ಎದ್ದು ಹಣವನ್ನು ಕದಿಯಲು ಪ್ರಯತ್ನಿಸುತ್ತಾರೆ ಆದ್ರೆ ನಾಲ್ಕನೇ ದಿನ ರಾತ್ರಿ ಪರ್ಸ್ ಕದ್ದು ಅದ್ರಲ್ಲಿ ಕೇವಲ ಅರ್ಧ ಆಣೆ ಇದ್ದು, ಬಾಂಬೆಗೆ ರೈಲಿನ ಟಿಕೇಟು ಮೂರು ಆಣೆ ಇರುತ್ತದೆ ಕದ್ದ ಹಣದಿಂದ ಬಾಂಬೆಗೆ ಹೋಗಲು ಸರಿಹೋಗುವುದಿಲ್ಲ.
  • ಇದರಿಂದ ನೊಂದು ತನ್ನ ನಿರ್ಧಾರ ಬದಲಿಸಿ ಹೆಚ್ಚಿಗೆ ಓದಬೇಕೆಂದು ನಿರ್ಧರಿಸಿ ಓದುವ ಆಸೆ ಹೆಚ್ಚಿಸಿಕೊಳ್ಳುತ್ತಾರೆ. ಸತಾರ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ತರಗತಿಯಲ್ಲಿ ಓದುತ್ತಿರುವಾಗ ಮಹಾರ ಎಂಬ ಅಸ್ಪೃಶ್ಯರದವರೆಂಬ ಕಾರಣಕ್ಕಾಗಿ ಹೆಚ್ಚು ಕಡಿಮೆ ಎಲ್ಲ ಶಿಕ್ಷಕರು ಇವರನ್ನು ಆಶಯದಿಂದ ನೋಡಿಕೊಳ್ಳುತ್ತಿದ್ದರು. ಯಾರು ಇವರ ಪ್ರತಿಭೆ ಗುರುತಿಸಲ್ಲಿಲ್ಲ.
  • ಆದರೆ ಶಿಕ್ಷಕರಲ್ಲಿ ಒಬ್ಬರಾದ ಫೆಂಡೆಸೆ ಅಂಬೇಡ್ಕರ್ ಎಂಬ ಶಿಕ್ಷಕರು ಈ ಬಾಲಕನ ಪ್ರತಿಭೆ,ಕಲಿಯುವ ಹಂಬಲ,ಸೂಕ್ಷ್ಮಬುದ್ಧಿಶಕ್ತಿಯನ್ನು ಗುರಿತಿಸಿ ಇವರಿಗೆ ಪ್ರೋತ್ಸಾಹಿಸಿದರು. ಜಾತಿಯಲ್ಲಿ ಶಿಕ್ಷಕರು ಬ್ರಹ್ಮಣರಾಗಿದ್ದರು ಕೂಡ ತಾವು ಊಟಕ್ಕೆ ತಂದಿದ್ದ ಬುತ್ತಿಯಲ್ಲಿ ಭೀಮರವರಿಗೆ ಒಂದಿಷ್ಟು ಕೊಟ್ಟು ಪ್ರೀತಿಯಿಂದ ಊಟ ಮಾಡಿಸುತ್ತಿದ್ದರು.
  • ಇದೆ ಫೆಂಡೆಸೆ ಅಂಬೇಡ್ಕರ್ ಭೀಮರಾವರವರ ಹೆಸರನ್ನು ತಮ್ಮ ಅಡ್ಡ ಹೆಸರಾದ ಅಂಬೇಡ್ಕರ್ ಎಂಬ ಹೆಸರನ್ನು ಅವರ ಅಡ್ಡ ಹೆಸರಿಗೆ ಬದಲಿಸಿ ಕೊಟ್ಟರು ಅಂದರೆ ಹಾಜರಿಯಲ್ಲಿ ಅವರ ಹೆಸರು ಭೀಮರಾವ್ ರಾಮಜಿ ಅಂಬೆವಾಡ್ಕರ್ ಎಂದು ಇದ್ದು, ಶಿಕ್ಷಕರು ಅದನ್ನು ಭೀಮರಾವ್ ರಾಮಜಿ ಅಂಬೇಡ್ಕರ್ ಎಂದು ತಿದ್ದಿದರು ಅಂದಿನಿಂದ ಭೀಮರಾವ್ ಅಂಬೇಡ್ಕರ್ ಆದರು.
  • ಪ್ರಾಥಮಿಕ ಶಿಕ್ಷಣ ಹಲವಾರು ನೋವು ಮತ್ತು ಅವಮಾನಗಳಿಂದ ಸಾತಾರದಲ್ಲಿ ಮುಗಿಸಿ,ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಂಬೆಯ ಸರಕಾರಿ ಪ್ರೌಢ ಶಾಲೆಯಾದ ಎಲಿಫಿನ್ ಸ್ಟನ್ ಹೈಸ್ಕೂಲಿಗೆ ಸೇರಲು ನಿರ್ಧರಿಸುತ್ತಾರೆ. ಸಾತರದಂತೆ, ಇವರಿಗೆ ಹೆಚ್ಚು ಶೋಷಣೆ ಅನ್ಯಾಯ ಚುಚ್ಚು ಮಾತು ಅಪಮರ್ಯಾದೆ ಇರಕ್ಕಿಲ್ಲ ಎಂಬ ಭಾವನೆಯೊಂದಿಗೆ ಬಾಂಬೆಗೆ ಹೋಗಿ ಕಾರ್ಮಿಕರ ಬಡಾವಣೆ ಪರೇಲ ಎಂಬಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಹಿಡಿದು ಶಾಲೆಗೆ ಸೇರಿಸುತ್ತಾರೆ.
  • ಆದರೆ ಶಾಲೆಗೆ ಸೇರುವ ಸಂಧರ್ಭದಲ್ಲಿಯೇ ಇವರಿಗೆ ಅಸ್ಪೃಶ್ಯತೆಯ ಅನುಭವವಾಗುತ್ತದೆ. ಶಾಲೆಯಲ್ಲಿ ಮೊದಲನೆಯ ಭಾಷೆ ಮರಾಠಿಯಾಗಿಯೂ,ಎರಡನೆಯ ಭಾಷೆ ಸಂಸ್ಕೃತ ಕಲಿಯಲು ಇಚ್ಛಿಸುತ್ತಾರೆ. ಆದರೆ ಸಂಸ್ಕೃತ ಶಿಕ್ಷಕರು ಇವರಿಗೆ ಸಂಸ್ಕೃತ ಕಲಿಸಲು ನಿರಾಕರಿಸುತ್ತಾರೆ.ಅದಕ್ಕಾಗಿಯೇ ಅನಿವಾರ್ಯವಾಗಿ ಪಾರ್ಸಿ ಭಾಷೆಯನ್ನು ಕಲಿಸಲು ನಿರ್ಧರಿಸುತ್ತಾರೆ.
  • ಒಂಬತ್ತನೆಯ ತರಗತಿಯಲ್ಲಿಯೂ ಇವರಿಗೆ ಅಸ್ಪೃಶ್ಯತೆಯು ಸಿಗುತ್ತದೆ. ಶಿಕ್ಷಕರು ಬೋರ್ಡ್ ಮೇಲೆ ಹಾಕಲಾಗಿದ್ದ ಬೀಜಗಣಿತದ ಲೆಕ್ಕ ಶಾಲೆಯ ಯಾವ ವಿದ್ಯಾರ್ಥಿ ಕೂಡ ಬಿಡಿಸದಿದ್ದಾಗ ಭೀಮರಾವ್ ರು ಬಿಡಿಸಲು ಬರುತ್ತಾರೆ. ಶಾಲೆಯ ಶಿಕ್ಷಕರು ಅನುಮತಿ ನೀಡುತ್ತಾರೆ . ಆದರೆ ವಿದ್ಯಾರ್ಥಿಗಳು ತಮ್ಮ ಊಟದ ಬುತ್ತಿ ಬೋರ್ಡಿನ ಹಿಂದುಗಡೆ ಇಟ್ಟಿರುವುದರಿಂದ ಮಹಾರ ವಿಧ್ಯಾರ್ಥಿ ಬೋರ್ಡ್ ಮುಟ್ಟಿದರೆ ಬುತ್ತಿ ಅಸ್ಪೃಶ್ಯವಾಗುತ್ತದೆ ಎಂದು ನಿರಾಕರಿಸಿದರು.
  • ಇಂತಹ ಕಹಿ ಅನುಭವಗಳ ಮಧ್ಯಯೇ ಡಾ. ಅಂಬೇಡ್ಕರ್ 1907ರಲ್ಲಿ 10ನೆ ತರಗತಿಯಲ್ಲಿ ಪಾಸಾಗುತ್ತಾರೆ ಒಟ್ಟು 750 ಅಂಕಗಳಿಗೆ 282 ಅಂಕ ಪಡೆದರು. ಅಸ್ಪೃಶ್ಯರಲ್ಲಿಯೇ ಇವರು ಇಷ್ಟು ಅಂಕಗಳನ್ನು ಪಡೆದು ಪಾಸದ ಮೊದಲನೇ ವಿದ್ಯಾರ್ಥಿ ಯಾಗುತ್ತಾರೆ . ಅಸ್ಪೃಶ್ಯರ ವರ್ಗದವರು ಈ ಬಾಲಕನಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲು ಆಗಿನ ಸಮಾಜ ಸುಧಾರಕರಾದ ಎಸ್ ಕೆ ಭೋಲೆಯವರು ನಿರ್ಧರಿಸುತ್ತಾರೆ.
  • ಸರಕಾರಿ ಶಾಲೆಯ ನಿವೃತ್ತ ಶಿಕ್ಷಕರಾದ ಕೆ ಎ ಕೆಲಸ್ಕರ್ ರವರು ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ. ಕೆ ಎ ಕೆಲಸ್ಕರ್ ರವರು ಅಂಬೇಡ್ಕರ್ ರವರನ್ನು ತುಂಬು ಹೃದಯದಿಂದ ಅಭಿನಂದಿಸಿದರು,ನೀವು ನಿಮ್ಮ ಸಮಾಜದ ಮತ್ತು ಭಾರತದ ಸುಧಾರಕರಾಗಬೇಕೆಂದು ಹರಿಸುತ್ತಾರೆ. ಮತ್ತು ಉನ್ನತ ವ್ಯಾಸಂಗಕ್ಕೆ ತಮ್ಮ ಕೈಲಾದ ಸಹಾಯ ಮಾಡುವೆವೆಂದು ಎಂದು ಹೇಳಿದರು.
  • ತಾವೆ ಬರೆದ ಭಗವಾನ್ ಬುದ್ಧನ ಚಾರಿತ್ರೆಯ ಪುಸ್ತಕವನ್ನು ಭೀಮರಾವರವರಿಗೆ ಕಾಣಿಕೆ ನೀಡುತ್ತಾರೆ. ಡಾ.ಅಂಬೇಡ್ಕರ್ ರವರು ಬೌದ್ಧ ಧರ್ಮಕ್ಕೆ ಒಲಿಯಲು ಈ ಪುಸ್ತಕವೇ ಪ್ರೋತ್ಸಾಹ ಕೊಡುತ್ತದೆ. ಅಂಬೇಡ್ಕರ್ ಅವರು 10 ನೇ ತರಗತಿ ಪಾಸಾದ ನಂತರ ಇವರ ಮನೆಯವರು ಡಾಪೋಲಿಯ ಬಿಕ್ಕು ವಾಲಂಗಕರ್ರವ ಎರಡನೆಯ ಪುತ್ರಿ ರಮಾಬಾಯಿಯವರೊಂದಿಗೆ ಮದುವೆ ಮಾಡುತ್ತಾರೆ.
  • ಆಗ ಅವರಿಗೆ 17 ವರ್ಷ ರಮಾಬಾಯಿಯವರಿಗೆ 9 ವರ್ಷ ವಯಸ್ಸಾಗಿತ್ತು. ಮುಂದಿನ ಅಭ್ಯಾಸಕ್ಕಾಗಿ ಎಲಿಫಿನ್ ಸ್ಟನ್ ಸೇರಿದ ಅಂಬೇಡ್ಕರ್ 1912 ರಲ್ಲಿ ಎಲಿಫಿನಸ್ಟನ್ ಕಾಲೇಜಿನಿಂದ ಬಿಎ ಮುಗಿಸುತ್ತಾರೆ. ಇವರಿಗೆ ಕೆ.ಎ ಕೆಲಸ್ಕರ್‍ರವರು ಪಿಯುಸಿ ಮತ್ತು ಬಿ ಎ ವ್ಯಾಸಂಗಕ್ಕಾಗಿ ಬರೊಡದ ಮಹಾರಾಜರಿಂದ ತಿಂಗಳಿಗೆ 25 ರೂಪಾಯಿಗಳ ಶಿಕ್ಷಣ ವೇತನವನ್ನು ಕೊಡಿಸುತ್ತಾರೆ.
  • ಬಿ ಎ ಓದುವಾಗ ಪ್ರೊ ಮುಲ್ಲರ್ ಎಂಬುವರು ಹೆಚ್ಚು ಪ್ರೋತ್ಸಾಹವನ್ನು ಕೊಟ್ಟಿರುತ್ತಾರೆ. ಅದಕ್ಕಾಗಿ ಡಾ. ಅಂಬೇಡ್ಕರ್ ರವರಿಗೆ ಇವರು ಆದರ್ಶರಾಗಿರುತ್ತಾರೆ. ಮೊದಲೇ ಸಯ್ಯಾಜಿರಾವ್ ಗಾಯಕವಾಡರೊಂದಿಗೆ ಮಾಡಿಕೊಂಡ ಒಪ್ಪಂದಂತೆ ಬಿ ಎ ಮುಗಿದ ನಂತರ ಬರೋಡಾದ ಮಹಾರಾಜರ ಆಸ್ಥಾನದಲ್ಲಿ ಮಿಲಿಟರಿ ಲೆಫ್ಟಿನೆಂಟ್ ಆಗಿ ನೇಮಕವಾಗುತ್ತಾರೆ.ಆದರೆ ಅವರು ಅಲ್ಲಿ ಹೆಚ್ಚು ಕಾಲ ಕೆಲಸ ಮಾಡಲಿಲ್ಲ.
  • ಕೇವಲ 15 ದಿನಗಳ ಕೆಲಸ ಮಾಡಿದರು,ತಂದೆ ಅನಾರೋಗ್ಯದಿಂದಿದ್ದಾರೆ ಎಂಬ ಟೆಲಿಗ್ರಾಮ್ ಬಂದಾಗ ಅವರು ಬರೋಡಾದಿಂದ ಬಾಂಬೆಗೆ ಬರುತ್ತಾರೆ.ತಂದೆ ಅಂತಿಮ ಕ್ಷಣ ಎಣಿಸುತ್ತಿದ್ದರು. ಬಂದ ಮಗನ ಮೈ ಮೇಲೆ ಕೈ ಎಳೆದು ಏನೋ ಹೇಳಲು ತಡವರಿಸಿ ಏನೂ ಹೇಳಲಾಗದೆ, ಫೆಬ್ರವರಿ 2 1913ಕ್ಕೆ ಪ್ರಾಣಬಿಟ್ಟರು. ತಂದೆ ಅಂತ್ಯಕ್ರಿಯೆಗಳನ್ನು ಮುಗಿಸಿದ ಡಾ. ಅಂಬೇಡ್ಕರರು ಮುಂದೆ ಏನು ಎಂಬ ಪ್ರಶ್ನೆಹಾಕಿಕೊಂಡು ಉನ್ನತ ವ್ಯಾಸಂಗ ಮಾಡಲು ನಿರ್ಧರಿಸುತ್ತಾರೆ.
  • ಇದೇ ಸಂಧರ್ಭದಲ್ಲಿ ಬರೋಡಾದ ಮಹಾರಾಜರು ಯೋಗ್ಯ ವಿದ್ಯಾರ್ಥಿಗಳಿಗೆ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ಓದಲು ಶಿಷ್ಯವೇತನ ಘೋಷಣೆ ಮಾಡುತ್ತಾರೆ. ಶಿಕ್ಷಕರಾದ ಕೆ. ಎ ಕೆಲಸ್ಕರ್ ರವರ ಜೊತೆಗೆ ಬರೋಡದ ಮಹಾರಾಜರಲ್ಲಿ ಬಂದು ಅಮೆರಿಕಾದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಶಿಷ್ಯವೇತನ ಪಡೆದು ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಓದಲು 1913ಕ್ಕೆ ಹೋಗುತ್ತಾರೆ.
  • ಅಲ್ಲಿ ಅರ್ಥಶಾಸ್ತ್ರ,ಸಮಾಜಶಾಸ್ತ್ರ,ಅತಿಹಾಸ,ತತ್ವಜ್ಞಾನ,ತರ್ಕಶಾಸ್ತ್ರ, ರಾಜ್ಯಶಾಸ್ತ್ರದಲ್ಲಿ ಅಧ್ಯಯನ ಮಾಡುತ್ತಾರೆ. 1915ರಲ್ಲಿ ಪ್ರಾಚೀನ ಭಾರತದ ವಾಣಿಜ್ಯ ಪ್ರಬಂದ ಮಂಡಿಸಿ ಎಂ ಎ ಪದವಿ ಪಡೆದರು. ಅದೇ ವರ್ಷ ಅಂತಾರಾಷ್ಟ್ರೀಯ ಸಮಾಜ ಶಾಸ್ತ್ರೀಯ ವಿಚಾರ ಸಂಕಿರಣದಲ್ಲಿ ಭಾರತೀಯ ಜಾತಿಗಳು ಎಂಬ ಪ್ರಬಂಧ ಮಂಡಿಸುತ್ತಾರೆ.
  • 1916ರಲ್ಲಿ ಭಾರತದಲ್ಲಿ ರಾಷ್ಟ್ರೀಯ ಉತ್ಪನ್ನ ಎಂಬ ಪ್ರಬಂಧ ಮಾಫಿಸಿ ಅದೇ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿಯನ್ನು ಪಡೆದರು. 8 ವರ್ಷದ ನಂತರ ಇಂಗ್ಲೆಂಡಿನ ಪ್ರಕಾಶನ ಸಂಸ್ಥೆ ಎಸ್ ಪಿ ಅಂಡ್ ಸನ್ಸ್, ಭಾರತದಲ್ಲಿ ರಾಷ್ಟ್ರೀಯ ಹಣ ಕಾಸಿನ ವಿಕಾಸ ಎಂಬ ಶೀರ್ಷಿಕೆಯಲ್ಲಿ ಪುಸ್ತಕವೊಂದು ಪ್ರಕಟಿಸಿತು. ಅಮೆರಿಕಾದಲ್ಲಿ ಇವರ ಮೇಲೆ ಪ್ರಭಾವ ಬೀರಿದ ಶಿಕ್ಷಕರೆಂದರೆ ಎಡ್ವಿನ್ ಕ್ಯಾನಾನ್, ಆರ್ ಎ ಸಲಿಗಮ್,ಜಾನ್ ಡಿವೆ.
  • ಅಮೆರಿಕಾದಲ್ಲಿ ಎಂ ಎ ,ಪಿಎಚ್ ಡಿ,ಪಡೆದ ನಂತರ ಉನ್ನತ ವ್ಯಾಸಂಗ ಇಂಗ್ಲೆಂಡಿನಲ್ಲಿ ಮುಂದುವರೆಸಲು ಅಂಬೇಡ್ಕರರು ಅಮೆರಿಕಾದಿಂದ ಇಂಗ್ಲೆಂಡಿಗೆ ಹೋಗುತ್ತಾರೆ. ಅಲ್ಲಿ ಲಂಡನ್ನಿನ ಅರ್ಥಶಾಸ್ತ್ರ ರಾಜಕೀಯಶಸ್ತ್ರ ವಿಶ್ವವಿದ್ಯಾಲಯದಲ್ಲಿ ಡಿ ಎಸ್ ಸಿ ಪದವಿಗಾಗಿ ನೋಂದಾಯಿಸಿಕೊಳ್ಳುತ್ತಾರೆ, ಅಲ್ಲದೆ ಗ್ರೇಸ್ ಇನ್ ಕಾಲೇಜಿನಲ್ಲಿ ಕಾನೂನು ಪದವಿಗೆ ಹೆಚ್ಚುವರಿಯಾಗಿ ಸೇರುತ್ತಾರೆ.

No comments:

Post a Comment

Types of arrays

What is arrays :                               An array is collection of elements where all the elements are same data type and under the ...